top of page

Courses We Offer

             Abhivyakthi has envisioned to groom new passionate students to attain excellence in Bharatanātya and also to guide them to relish and appreciate the beauty of dance. Abhivyakthi follows the dance style of Kalakshetra. 
               Abhivyakthi conducts physical Bharatanātya classes in Mysore and online classes for distant students. It also holds individual and group classes based on the requirement and enthusiasm of the students. It also conducts biannual dance workshops, residential camps and provides an opportunity to students to interact with senior artists. 

                The dance classes are conducted twice a week, the classes of 1 hour and 30 minutes will have 20 minutes of stretching exercise. Along with the dance, a class of music will also be conducted every month.  

          ಅಭಿವ್ಯಕ್ತಿಯಲ್ಲಿ ಭರತನಾಟ್ಯದಲ್ಲಿ ಒಲವಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಿ ಅವರು ಸಮರ್ಥ ನರ್ತಕಿ/ನರ್ತಕ ನನ್ನಾಗಿ ರೂಪಿಸಲಾಗುವುದು. ಈ ಇಡೀ ಪ್ರಕ್ರಿಯೆಯ ಸಂದರ್ಭದಲ್ಲಿ ವಿದ್ಯಾರ್ಥಿಯು ತನ್ನದೇ ಆದ ಒಂದು ಗಟ್ಟಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಮಗ್ರವಾದ ನೆರವನ್ನು ನೀಡಲಾಗುವುದು.
          ಅಭಿವ್ಯಕ್ತಿಯು ಬೋಧನೆಗೆ ತನ್ನದೇ ಆದ ಹಲವು ವಿಶಿಷ್ಟವಾದ ಕ್ರಮಗಳನ್ನು ಅನುಸರಿಸುತ್ತಿದ್ದು ಪ್ರತಿ ವಿದ್ಯಾರ್ಥಿಯು ಕಲೆಯನ್ನು ಆಸ್ವಾದಿಸಲು ಮತ್ತು ಪ್ರದರ್ಶನ ನೀಡಲು ಸಮರ್ಥರನ್ನಾಗಿ ಮಾಡಲಾಗುವುದು.
               ಅಭಿವ್ಯಕ್ತಿಯಲ್ಲಿ ವಿದ್ಯಾರ್ಥಿಗಳು ಕಲಾಕ್ಷೇತ್ರ ಶೈಲಿಯಲ್ಲಿ ಭರತನಾಟ್ಯವನ್ನು ಕಲಿಯುವರು. ವಿದ್ಯಾರ್ಥಿಯ ಮನೋಭಾವ ಮತ್ತು ಸಾಮರ್ಥ್ಯವನ್ನು ಅವಲಂಬಿಸಿ ವಿದ್ಯಾರ್ಥಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಯುಕ್ತಿಕ ಕಲಿಕಾ ಯೋಜನೆಯನ್ನು ರೂಪಿಸಿ ಪಾಲಿಸಲಾಗುವುದು.

            ಅಭಿವ್ಯಕ್ತಿ ವಾರದಲ್ಲಿ ಎರಡು ಬಾರಿ ನೃತ್ಯ ತರಗತಿಗಳನ್ನು ನಡೆಸುತ್ತದೆ.  ೧ ಗಂಟೆ ೩೦ ನಿಮಿಷಗಳ ತರಗತಿಯಲ್ಲಿ ೨೦ ನಿಮಿಷಗಳ ಕಾಲ ದೇಹದ ಸಬಲತೆಗೆ ಬೇಕಾಗುವಂತಹ ವ್ಯಾಯಾಮ ತರಗತಿ ಇರುತ್ತದೆ. ಹೊರ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನೀಡುವ ವ್ಯವಸ್ಥೆ ಇದೆ. ಇಚ್ಛಿಸುವ ವಿದ್ಯಾರ್ಥಿಗಳಿಗೆ ವೈಯುಕ್ತಿಕ ತರಗತಿಗಳನ್ನು ನೀಡಲಾಗುತ್ತದೆ.

            ಅಭಿವ್ಯಕ್ತಿಯು ವರ್ಷದಲ್ಲಿ ಎರಡು ನೃತ್ಯ ಕಾರ್ಯಾಗಾರವನ್ನು ನಡೆಸುವುದರೊಂದಿಗೆ ಕೆಲವು ನೃತ್ಯ ಶಿಬಿರವನ್ನು ನಡೆಸುತ್ತದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ  ನೀಡಲು ಆಗ್ಗಿಂದಾಗ್ಗೆ ಹಿರಿಯ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಗುವುದು.

                ನೃತ್ಯಕ್ಕೆ ಸಂಗೀತವು ತಳಹದಿಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ನುರಿತ ಸಂಗೀತಗಾರರಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತದ ತರಗತಿಗಳನ್ನು ಸಹ ನೀಡಲಾಗುವುದು.

DSC01274.JPG

Discover the Art of Dancing with us

bottom of page